Breaking Newsಸಿನಿಮಾ

23 ದಿನಗಳ ಬಳಿಕ ಜೈಲಿನಿಂದ ಬಿಡುಗಡೆ; ಮನೆಗೆ ಮರಳಿದ ಆರ್ಯನ್ ಖಾನ್

ಮುಂಬೈ: ಬಂಧನಕ್ಕೊಳಗಾದ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ 23 ದಿನಗಳ ಬಳಿಕ ಜೈಲಿನಿಂದ ಬಿಡುಗಡೆಯಾಗಿ ಮನೆಗೆ ಮರಳಿದ್ದಾರೆ.

23 ವರ್ಷದ ಆರ್ಯನ್ ಖಾನ್​ಗೆ ಗುರುವಾರವೇ ಜಾಮೀನು ದೊರಕಿತ್ತಾದರೂ, ನಿನ್ನೆ ಬಿಡುಗಡೆಗೆ ಸಂಬಂಧಿಸಿದಂತೆ ಆದೇಶ ನಿಗದಿತ ಸಮಯದೊಳಗೆ ಜೈಲು ಅಧಿಕಾರಿಗಳಿಗೆ ತಲುಪದೇ ಇದ್ದುದರಿಂದ ಇನ್ನೂ ಒಂದು ರಾತ್ರಿಯನ್ನು ಅವರು ಜೈಲಿನಲ್ಲಿಯೇ ಕಳೆಯುವಂತಾಗಿತ್ತು.

ಆರ್ಯನ್ ಪರವಾಗಿ ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ವಾದಿಸಿ, ಜಾಮೀನು ದೊರಕಿಸುವಲ್ಲಿ ಯಶಸ್ವಿಯಾಗಿದ್ದರು. ನಿನ್ನೆ ಬಾಲಿವುಡ್ ನಟಿ ಜೂಹಿ ಚಾವ್ಲಾ, ಒಂದು ಲಕ್ಷದ ಶೂರಿಟಿ ಬಾಮಡ್ ನೀಡಿ, ಆರ್ಯನ್ ಬಿಡುಗಡೆ ಅಗತ್ಯ ಪ್ರಕ್ರಿಯೆ ಮುಗಿಸಿದ್ದರು. ಆದರೆ ನಿಗದತ ಸಮಯದೊಳಗೆ ಸಂಬಂಧಿತ ಪೇಒರ್​ಗಳು ಜೈಲು ಅಧಿಕಾರಿಗಳಿಗೆ ತಲುಪಿರಲಿಲ್ಲ.

ಆರ್ಯನ್ ಖಾನ್ ಜೈಲಿನಿಂದ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಬೆಳಗ್ಗಿನಿಂದಲೇ ಅಭಿಮಾನಿಗಳು ಶಾರೂಖ್ ಅವರ ಮನ್ನತ್ ನಿವಾಸದೆದುರು ಸೇರಿದ್ದರು.

ಪೊಲೀಸರಿಗೆ ಮಾಹಿತಿ ನೀಡದೆ ಆರ್ಯನ್ ಖಾನ್ ಮುಂಬೈ ಬಿಟ್ಟು ತೆರಳುವಂತಿಲ್ಲ. ಪ್ರತಿ ಶುಕ್ರವಾರ ಎನ್​ಸಿಬಿ ಎದುರು ಹಾಜರಾಗಬೇಕು ಎಂಬ ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ.

Related Articles

Leave a Reply

Your email address will not be published.

Back to top button