ಆರ್ಯನ್ ಖಾನ್ ಕೇಸ್: ಎನ್ಸಿಬಿ ವಿರುದ್ಧ ತಿರುಗಿಬಿದ್ದ ಸಾಕ್ಷಿ; 18 ಕೋಟಿ ಡೀಲ್ ಆರೋಪ
ಮುಂಬೈ: ನಟ ಶಾರೂಖ್ ಕಾನ್ ಪುತ್ರ ಆರ್ಯನ್ ಖಾನ್ ಬಂಧನಕ್ಕೊಳಗಾಗಿರುವ ಡ್ರಗ್ ಪ್ರಕರಣದಲ್ಲಿ ಸಾಕ್ಷಿಯಾಗಿರುವ ಪ್ರಭಾಕರ್ ಸೈಲ್ ಇದೀಗ (ನಾರ್ಕೋಟಿಕ್ ಕಂಟ್ರೋಲ್ ಬೋರ್ಡ್) ಎನ್ಸಿಬಿ ವಿರುದ್ಧವೇ ತಿರುಗಿಬಿದ್ದಿದ್ದಾನೆ.
ಎನ್ಸಿಬಿ ಅಧಿಕಾರಿ ಸಮೀರ್ ವಾಂಖೇಡೆಗೆ 8 ಕೋಟಿ ಪಾವತಿಸಲಾಗಿದೆ ಎಂದು ಸಾಲಿ ಕೋರ್ಟ್ಗೆ ಸಲ್ಲಿಸಿರುವ ಹೊಸ ಅಫಿಡವಿಟ್ನಲ್ಲಿ ಆರೋಪಿಸಿರುವುದು ತೀವ್ರ ಸಂಚಲನ ಮೂಡಿಸಿದೆ.
ಇದಕ್ಕೆ ವಿಶೇಷ ನ್ಯಾಯಾಲಯದಲ್ಲಿ ಪ್ರತಿ ಅಫಿಡವಿಟ್ ಸಲ್ಲಿಸಿರುವ ಎನ್ಸಿಬಿ ಮತ್ತು ಎನ್ಡಿಪಿಎಸ್, ಸೈಲ್ ಆರೋಪವನ್ನು ಅಲ್ಲಗಳೆದಿದೆ. ಅಧಿಖಾರಿ ವಾಂಖೇಡೆ ಕೂಡ ಪ್ರತ್ಯೇಕ ಅಫಿಡವಿಟ್ ಸಲ್ಲಿಸಿದ್ದಾರೆ.
ಪ್ರಭಾಕರ್ ಸೈಲ್ ತನ್ನನ್ನು ಕೆಪಿ ಗೋಸಾವಿಯ ಅಂಗರಕ್ಷಕ ಎಂದು ಅಫಿಡವಿಟ್ನಲ್ಲಿ ಹೇಳಿಕೊಂಡಿದ್ದಾನೆ. ಆರ್ಯನ್ ಖಾನ್ ಜೊತೆಗಿನ ಸೆಲ್ಫೀ ಮೂಲಕ ಸುದ್ದಿಯಾಗಿದ್ದ ಮತ್ತು ಆ ಬಳಿಕ ಖಾಸಗಿ ಪತ್ತೇದಾರನೆಂದು ಸುದ್ದಿಯಾಗಿದ್ದ ವ್ಯಕ್ತಿಯೇ ಈ ಕೆಪಿ ಗೋಸಾವಿಯಾಗಿದ್ದು, ಗೋಸಾವಿ ಮತ್ತು ಸ್ಯಾಮ್ ಡಿಸೋಜ ನಡುವಿನ ಅ.3ರ ಸಂಭಾಷಣೆಯನ್ನು ತಾನು ಕೇಳಿಸಿಕೊಂಡಿದ್ದುದಾಗಿ ಹೇಳಿರುವ ಸಾಲಿ, ಅವರ ನಡುವೆ 18 ಕೋಟಿಯ ಡೀಲ್ ಆಗಿದೆ ಎಂದು ಆರೋಪಿಸಿದ್ದಾನೆ.
ಆರ್ಯನ್ ಖಾನ್ ಜೊತೆಗೆ ಸೆಲ್ಫೀ ತೆಗೆದುಕೊಂಡಿರುವ ಗೋಸಾವಿ ಯಾರೆಂಬ ಅನುಮಾನ ಎದ್ದಾಗ, ಆತ ಸ್ವತಂತ್ರ ಸಾಕ್ಷಿ ಎಂದು ಹೇಳಿತ್ತು. ಆತನೀಗ ನಾಪತ್ತೆಯಾಗಿದ್ದಾನೆ.
ಸಮೀರ್ ವಾಂಖೇಡೆಗೆ 8 ಕೋಟಿ ಕೊಟ್ಟಿರುವುದಾಗಿ ಸಂಭಾಷಣೆಯಲ್ಲಿ ಗೋಸಾವಿ ಹೇಳಿದ್ದುದಾಗಿ ಹೊಸ ಅಫಿಡವಿಟ್ನಲ್ಲಿ ಪ್ರಭಾಕರ್ ಸೈಲ್ ಆರೋಪಿಸಿದ್ದಾನೆ. ಆದರೆ ಸಾಲಿ ಹೇಳಿಕೆ ಎನ್ಸಿಬಿಯ ಹೆಸು ಕೆಡಿಸುವ ಉದ್ದೇಶದ್ದಾಗಿದೆ ಎಂದು ಎನ್ಸಿನಿ ಮೂಲಗಳು ವಾದಿಸಿವೆ.