Breaking NewsLatest

ಕಾಂಗ್ರೆಸ್​ಗೆ ಕ್ಯಾಪ್ಟನ್ ಅಮರೀಂದರ್ ಸಿಂಗ್ ರಾಜೀನಾಮೆ

ಚಂಡೀಘಡ: ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಕಾಂಗ್ರೆಸ್​ಗೆ ರಾಜೀನಾಮೆ ನೀಡಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಅಮರೀಂದರ್ ಸಿಂಗ್ ಪತ್ರವೊಂದನ್ನು ಬರೆದಿದ್ದು, ನಿಮ್ಮ ನಡೆಯಿಂದ ನನಗೆ ನೋವಾಗಿದೆ ಎಂದು ನೇರವಾಗಿ ಹೇಳಿದ್ದಾರೆ.

ನನ್ನ ವಿರೋಧದ ನಡುವೆಯೂ, ಪಂಜಾಬ್​ನ ಹೆಚ್ಚು ಕಡಿಮೆ ಎಲ್ಲ ಸಂಸದರ ವಿರೋಧದ ನಂತರವೂ ನವಜೋತ್ ಸಿಂಗ್ ಸಿಧುವನ್ನು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ನೇಮಿಸಿದ ಕ್ರಮಕ್ಕೆ ತೀವ್ರ ಅಸಮಾಧಾನವನ್ನು ಪತ್ರದಲ್ಲಿ ಕ್ಯಾಪ್ಟನ್ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಬಜ್ವಾ ಮತ್ತು ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಸಾರ್ವಜನಿಕವಾಗಿ ಆಲಿಂಗಿಸಿಕೊಂಡಿದ್ದ ಸಿಂಧು ಅವರನ್ನು ಪಂಜಾಬ್ ಕಾಂಗ್ರೆಸ್ ಅದ್ಯಕ್ಷ ಸ್ಥಾನಕ್ಕೆ ನೇಮಿಸಿದಿರಿ ಎಂದು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

1954ರಿಂದಲೂ ಅಂದರೆ 67 ವರ್ಷಗಳಿಂದ ನಾವು ಒಟ್ಟಿಗಿದ್ದೆವು. ನಿಮ್ಮ ಮಕ್ಕಳ ಬಗ್ಗೆಯೂ ಅವರ ತಂದೆಯವರನ್ನು ಅವತ್ತಿನಿಂದಲೂ ಬಲ್ಲವನಾಗಿ ಈಗಲೂ ಪ್ರೀತಿಯಿಟ್ಟುಕೊಂಡಿದ್ದೇನೆ. ಅವರ್ನು ನನ್ನ ಮಕ್ಕಳಂತೆಯೇ ಕಾಣುತ್ತೇನೆ. ಆದರೆ ನಿಮ್ಮ ನಡೆ ಮತ್ತು ನಿಮ್ಮ ಮಕ್ಕಳಿಂದಲೂ ನನಗೆ ತುಂಬಾ ನೋವಾಗುವಂತಾಯಿತು ಎಂದು ಒತ್ರದಲ್ಲಿ ಕ್ಯಾಪ್ಟನ್ ಹೇಳಿದ್ದಾರೆ.

ಹೀಗೆ ಅವರು ನೇರವಾಗಿ ಸೋನಿಯಾ ಗಾಂಧಿ, ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ವಿರುದ್ಧ ಪತ್ರದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button