ಸ್ನೇಹಿತೆ ವಿರುದ್ಧ ಐಎಸ್ಐ ಲಿಂಕ್ ಆರೋಪ; ಸೋನಿಯಾ ಜೊತೆಗಿನ ಅರೂಸಾ ಫೋಟೊ ಮೂಲಕ ಕ್ಯಾಪ್ಟನ್ ತಿರುಗೇಟು
ಚಂಡಿಘಡ: ಪಂಜಾಬ್ ಮಾಜಿ ಸಿಎಂ ಅಮರೀಂದರ್ ಸಿಂಗ್ ಅವರ ಪಾಕಿಸ್ತಾನಿ ಪತ್ರಕರ್ತ ಸ್ನೇಹಿತೆ ಅರೂಸಾ ಅಲಮ್ ಅವರ ಐಎಸ್ಐ ಲಿಂಕ್ ಬಗ್ಗೆ ಪೊಲೀಸರು ತನಿಖೆ ನಡೆಸಲಿದ್ದಾರೆ ಎಂಬ ಪಂಜಾಬ್ ಡಿಸಿಎಂ ಸುಖ್ಜಿಂದರ್ ಸಿಂಗ್ ರಂಧಾವಾ ಟ್ವೀಟ್ಗೆ ಕ್ಯಾಪ್ಟನ್ ತಿರುಗೇಟಯು ಕೊಟ್ಟಿದ್ದಾರೆ.
ರಂಧಾವಾ ಟ್ವೀಟ್ಗೆ ಪ್ರತಿಯಾಗಿ ಅಮರೀಂದರ್ ಸಿಂಗ್ ಅವರ ಮಾಧ್ಯಮ ಸಲಹೆಗಾರ ಒಂದು ಫೋಟೊವನ್ನು ಪೋಸ್ಟ್ ಮಾಡಿದ್ದಾರೆ. ಕಅಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅರೋಸಾ ಅಲಮ್ ಕೈಕುಲುಕುತ್ತಿರುವ ಆ ಫೋಟೋಗೆ “ಸುಮ್ಮನೆ (ಫೈಲ್ ಫೋಟೋ)” ಎಂದು ಅಡಿಬರಹ ಕೊಡಲಾಗಿದೆ.
ಅರೂಸಾ ಅವರು ಐಎಸ್ಐ ಏಜಂಟ್ ಎಂಬುದು ನಿಜವೇ ಎಂಬ ಮಾಧ್ಯಮದವರ ಪ್ರಶ್ನೆಗೆ ನಿನ್ನೆ ಜಲಂಧರ್ನಲ್ಲಿ ಉತ್ತರಿಸಿದ್ದ ರಂಧಾವಾ, ಈ ಬಗ್ಗೆ ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚಿಸಿರುವುದಾಗಿ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಅಮರೀಂದರ್ ಸಿಂಗ್, ತಮ್ಮ ಸಂಪುಟದಲ್ಲಿ ಸಚಿವರಾಗಿದ್ದ ರಂಧಾವಾ ಒಮ್ಮೆಯೂ ಅರೂಸಾ ಬಗ್ಗೆ ದೂರಿದ್ದನ್ನು ತಾವು ಕೇಳಿಯೇ ಇಲ್ಲ ಎಂದು ವ್ಯಂಗ್ಯವಾಡಿದ್ದರು.
ಅಮರೀಂದರ್ ಸಿಂಗ್ ಸಿಎಂ ಆಗಿದ್ದ ಅವಧಿಯಲ್ಲಿ ಪಾಕಿಸ್ತಾನದಿಂದ ಡ್ರೋನ್ಗಳು ಬರುತ್ತಿದ್ದುದರ ಬಗ್ಗೆ ತನಿಖೆ ನಡೆಸುವಂತೆ ಪೊಲೀಸರಿಗೆ ನಿರ್ದೇಶಿಸಿರುವುದಾಗಿ ನಿನ್ನೆ ರಂಧಾವಾ ಹೇಳಿದ್ದ ಬೆನ್ನಲ್ಲೇ ಅಮರೀಂದರ್ ಸಿಂಗ್ ಮಾಧ್ಯಮ ಸಲಹೆಗಾರರಾದ ರವೀನ್ ತುಕ್ರಲ್ ಟ್ವೀಟ್ ಮಾಡಿರುವ ಟ್ವೀಟ್ನಲ್ಲಿ, ಕಳೆದ 16 ವರ್ಷಗಳಿಂದ ಅರೂಸಾ ಇಲ್ಲಿಗೆ ಬರುತ್ತಿದ್ದಾರೆ ಎಂದಿರುವ ಅಮರೀಂದರ್ ಸಿಂಗ್, ಆ ಅವಧಿಯಲ್ಲಿನ ಎನ್ಡಿಟೆ ಮತ್ತು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರಗಳೆರಡೂ ಐಎಸ್ಐ ಜೊತೆ ಸೇರಿಕೊಂಎಇವೆ ಎಂದು ನೀವು ಆರೋಪಿಸುತ್ತಿದ್ದೀರಾ ಎಂದು ಕೆಣಕಿ ಕೇಳಿದ್ದಾರೆ.
ಎಲ್ಲೆಡೆ ಹಬ್ಬದ ಸಂಭ್ರಮವಿರುವ ಹೊತ್ತಲ್ಲಿ, ಉಗ್ರರ ಬೆದರಿಕೆ ಹೆಚ್ಚಿರುವ ಹೊತ್ತಲ್ಲಿ ಕಾನೂನು ಸುವ್ಯವಸ್ಥೆ ಪಾಲಿಸುವುದಕ್ಕೆ ಗಮನ ಕೊಡುವ ಬದಲು ಪಂಜಾಬ್ನ ಸುರಕ್ಷತೆಯನ್ನು ಪಣಕ್ಕಿಟ್ಟು ಆಧಾರ ರಹಿತ ಆರೋಪಗಳ ವಿಚಾರದಲ್ಲಿ ತನಿಖೆಗೆ ಪೊಲೀಸರನ್ನು ಅಟ್ಟುತ್ತಿದ್ದೀರಿ ಎಂದು ರಂಧಾವಾ ವಿರುದ್ಧ ಅಮರೀಂದರ್ ಸಿಂಗ್ ಕಿಡಿಕಾರಿದ್ದಾರೆ. ವೈಯಕ್ತಿಕ ದಾಳಿಗೆ ಮುಂದಾಗಿದ್ದಾರೆ ಎಂದೂ ರಂಧಾವಾ ವಿರುದ್ಧ ಕ್ಯಾಪ್ಟನ್ ಆರೋಪಿಸಿದ್ದಾರೆ.
ಅಧಿಕಾರಕ್ಕೆ ಬಂದು ತಿಂಗಳಾಗುವುದರೊಳಗೇ ನೀವು ನಿಮ್ಮ ಬಣ್ಣ ತೋರಿಸುತ್ತಿದ್ದೀರಿ. ಡ್ರಗ್ ಪ್ರಕರಣ ಕುರಿತ ನಿಮ್ಮ ಭರವಸೆ ಏನಾಯಿತು? ನಿಮ್ಮ ಕ್ರಮದ ಬಗ್ಗೆ ಪಂಜಾಬ್ ಇನ್ನೂ ಕಾದಿದೆ ಎಂದು ಅಮರೀಂದರ್ ಸಿಂಗ್ ಹೇಳಿದ್ದಾರೆ.