Breaking NewsLatest
ದೇಶದ ಶೇ.95ರಷ್ಟು ಜನರಿಗೆ ಪೆಟ್ರೋಲ್ ಅಗತ್ಯವಿಲ್ಲ: ಯುಪಿ ಮಂತ್ರಿ ಉಪೇಂದ್ರ ತಿವಾರಿ ಬೇಜವಾಬ್ದಾರಿ ಹೇಳಿಕೆ
ಜಲೌನ್: ಪೆಟ್ರೋಲ್ ಮತ್ತು ಡೀಸೇಲ್ ದರಗಳು ದಿನದಿಂದ ದಿನಕ್ಕೆ ಗರಿಷ್ಠ ಮಟ್ಟದಲ್ಲಿ ಹೆಚ್ಚಾಗುತ್ತಿರುವ ಜತೆಗೆ ಎಲ್ಲ ಅಗತ್ಯವ ವಸ್ತುಗಳ ಬೆಲೆ ಏರಿಕೆಯಾಗುತ್ತಿರುವ ಈ ಸಂದರ್ಭದಲ್ಲಿ ಉತ್ತರ ಪ್ರದೇಶದ ಮಂತ್ರಿಯೋರ್ವರು ಬೇಜವಾಬ್ದಾರಿಯುತ ಹೇಳಿಕೆ ನೀಡಿರುವುದು ಪ್ರತಿಪಕ್ಷಗಳಿಂದ ಟೀಕೆಗೆ ಗುರಿಯಾಗಿದೆ.
ಉತ್ತರ ಪ್ರದೇಶದ ರಾಜ್ಯ ಸಚಿವ ಉಪೇಂದ್ರ ತಿವಾರಿ ಸುದ್ದಿಗಾರರೊಂದಿಗೆ ಮಾತನಾಡಿ, ಭಾರತದ ಶೇ.95ರಷ್ಟು ಜನರಿಗೆ ಪೆಟ್ರೋಲ್, ಡಿಸೇಲ್ ಅಗತ್ಯವೇ ಇಲ್ಲ. ಬೆರಳೆಣಿಕೆಯಷ್ಟು ಮಂದಿ ಮಾತ್ರವೇ ನಾಲ್ಕು ಚಕ್ರದ ವಾಹನಗಳನ್ನು ಬಳಕೆ ಮಾಡುತ್ತಾರೆ. ಅವರಿಗೆ ಮಾತ್ರ ಪೆಟ್ರೋಲ್ ಅಗತ್ಯವಿದೆ ಎಂದು ಹೇಳಿದ್ದಾರೆ.
ಸರ್ಕಾರವನ್ನು ದೂರಲು ಪ್ರತಿಪಕ್ಷಗಳಿಗೆ ಯಾವುದೇ ವಿಚಾರ ಸಿಗುತ್ತಿಲ್ಲ. ಕಳೆದ 2014ಕ್ಕಿಂತ ಮೊದಲು ಹಾಗೂ ಈಗಿನ ಅಂಕಿ-ಅಂಶಗಳನ್ನು ಗಮನಿಸಿದರೆ ತಿಳಿಯುತ್ತದೆ. ಬಿಜೆಪಿ ಅಧಿಕಾರಾವಧಿಯಲ್ಲಿ ತಲಾದಾಯವು ದ್ವಿಗುಣಗೊಳ್ಳುತ್ತ ಬಂದಿದೆ ಎಂದಿದ್ದಾರೆ