ಪಾಕ್ ಗೆಲುವನ್ನು ಸಂಭ್ರಮಿಸಿದರೆಂಬ ಆರೋಪ; ಮೂವರು ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ದೇಶದ್ರೋಹ ಕೇಸ್
ಆಗ್ರಾ: ಭಾರತದ ವಿರುದ್ಧ ಟಿ20 ವಿಶ್ವಕಪ್ ಪಂದ್ಯದಲ್ಲಿ ಪಾಕ್ ಗೆದ್ದುದನ್ನು ಸಂಭ್ರಮಿಸಿದರೆಂಬ ಆರೋಪದ ಮೇಲೆ ಮೂವರು ಕಾಶ್ಮೀರಿ ವಿದ್ಯಾರ್ಥಿಗಳನ್ನು ಉತ್ತರ ಪ್ರದೇಶದ ಆಗ್ರಾದಲ್ಲಿ ನಿನ್ನೆ ಬಂಧಿಸಲಾಗಿದೆ.
ಬಂಧಿತ ಮೂವರೂ ಎಂಜಿನಿಯರಿಂಗ್ ವಿದ್ಯಾರ್ಥಿಗಳಾಗಿದ್ದು, ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆ. ಮುಖ್ಯಂತ್ರಿ ಯೋಗಿ ಆದಿತ್ಯನಾಥ್ ಕಚೇರಿಯೇ ಈ ಬಗ್ಗೆ ಟ್ವೀಟ್ ಮಾಡಿದೆ.
ಧರ್ಮದ ಆಧಾರದ ಮೇಲೆ ಗುಂಪುಗಳ ನಡುವೆ ದ್ವೇಷ ಬಿತ್ತಿದ ಆರೋಪ ಮತ್ತು ಸೈಬರ್ ಭಯೋತ್ಪಾದನೆ ಆರೋಪವ್ನೂ ಆ ವಿದ್ಯಾರ್ಥಿಗಳ ಮೇಲೆ ಹೊರಿಸಲಾಗಿದೆ.
ಮೂವರೂ ವಿದ್ಯಾರ್ಥಿಗಳನ್ನು ಕಾಲೇಜು ಈಗಾಗಲೇ ಹೊರಹಾಕಿದ್ದು, ಭಾರತ-ಪಾಕಿಸ್ತಾನ ಪಂದ್ಯದ ನಂತರ ಪಾಕಿಸ್ಅನದ ಪರವಾಗಿ ಪೋಸ್ಟ್ ಹಾಕಿ ಅಶಿಸ್ತು ತೋರಿರುವುದು ಗಮನಕ್ಕೆ ಬಂದಿದೆ ಎಂದು ಕಾಲೇಜು ಆಡಳಿತ ಮಂಡಳಿ ಹೇಳಿದೆ.
ಇವರಲ್ಲದೆ ಉತ್ತರ ಪ್ರದೇಶದ ಇನ್ನೂ ನಾಲ್ವರನ್ನು ಇದೇ ವಿಚಾರಕ್ಕೆ ಸಂಬಂಧಿಸಿ ಬಂಧಿಸಲಾಗಿದ್ದು, ಮೂವರು ಬರೇಲಿಯವರೂ, ಓರ್ವ ಲಕ್ನೋದವನೂ ಆಗಿದ್ದಾರೆ.
ಜೀತ್ ಗಯೀ ಎಂಬ ವಾಟ್ಸ್ಯಾಪ್ ಸ್ಟೇಟಸ್ ಕಾರಣಕ್ಕೆ ರಾಜಸ್ತಾನದಲ್ಲಿ ಶಿಕ್ಷಕಿಯೊಬ್ಬರನ್ನು ವಜಾಗಗೊಳಿಸಿ ಅವರ ವಿರುದ್ಧ ಕೇಸ್ ದಾಖಲಿಸಲಾಗಿತ್ತು ಎಂಬುದನ್ನೂ ಇಲ್ಲಿ ಗಮನಿಸಬಹುದು.