ಬೆಂಗಳೂರು

ಶ್ರೀ ಸಿದ್ದರಾಮೇಶ್ವರ ಜಯಂತಿ ಆಚರಣೆ

ಕೆಆರ್ ಪುರ : ಚಾಲುಕ್ಯ ಸಾಮ್ರಾಜ್ಯ ಕಲ್ಯಾಣದಲ್ಲಿ ನಡೆದ ಸಾಮಾಜಿಕ ಮತ್ತು ವಚನ ಕ್ರಾಂತಿಯನ್ನು ನಾಡಿನೆಲ್ಲೆಡೆ ಸಂಚರಿಸುವ ಮೂಲಕ ನಾಡಿನ ಮೂಲೆ ಮೂಲೆಗೆ ತಲುಪಿಸಿದ ಶ್ರೀ ಗುರು ಸಿದ್ದರಾಮೇಶ್ವರರ ಕಾರ್ಯ ಸದಾ ಸ್ಮರಣೀಯ ಎಂದು ಶಾಸಕ ಅರವಿಂದ ಲಿಂಬಾವಳಿ ತಿಳಿಸಿದರು.

ಕೆ. ಆರ್. ಪುರ ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಶ್ರೀ ಸಿದ್ದಯೋಗಿ ಸಿದ್ದರಾಮೇಶ್ವರರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು,ಶರಣ ಸಂಸ್ಕೃತಿಯ ಪಂಚ ಪ್ರಥಮರೆಂದೇ ಖ್ಯಾತಿವೆತ್ತವರಲ್ಲಿ ಕಾಯಕಯೋಗಿ ಶ್ರೀ ಗುರು ಸಿದ್ದರಾಮೇಶ್ವರರವರೂ ಒಬ್ಬರು.

ಕಪಿಲ ಸಿದ್ಧಮಲ್ಲಿಕಾರ್ಜುನ ಎಂಬ ಅಂಕಿತದೊಡನೆ ಸಾವಿರಾರು ವಚನಗಳನ್ನು ರಚಿಸಿ ಅವುಗಳ ಮೂಲಕ ಸಮಾಜಕ್ಕೆ ಶ್ರೇಷ್ಠ ಉಪದೇಶ ನೀಡಿದವರು ಪೂಜ್ಯ ಸಿದ್ದರಾಮೇಶ್ವರರು. ಅವರ ಜಯಂತಿಯಂದು ಅವರಿಗೆ ನಮಿಸಿ ಅವರು ತೋರಿದ ಸನ್ಮಾರ್ಗದಲ್ಲಿ ನಡೆಯುವ ಶಕ್ತಿ ಎಲ್ಲರಿಗೂ ದಯಪಾಲಿಸಲಿ ಎಂದರು.

ಯಾವುದೇ ಇಂದು ಧರ್ಮ, ಜಾತಿಗೆ ಶ್ರೀ ಸಿದ್ದರಾಮೇಶ್ವರರನ್ನು ಸೀಮಿತಗೊಳಿಸಬಾರದು,ಪ್ರತಿಯೊಬ್ಬರು ಅವರ ಆದರ್ಶಗಳನ್ನು ಪಾಲಿಸಿ ಸನ್ಮಾರ್ಗದಲ್ಲಿ ನಡೆಯುವಂತಾಗಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಅಜಿತ್ ಕುಮಾರ್ ರೈ, ಮಾಜಿ ಪಾಲಿಕೆ ಸದಸ್ಯ ವಿ.ಸುರೇಶ್, ಮಾಜಿ ನಗರ ಸಭಾ ಸದಸ್ಯ ಬಾಲಕೃಷ್ಣ ಮತ್ತಿತರರು ಇದ್ದರು.

Leave a Reply

Your email address will not be published.

Back to top button