ಬೆಂಗಳೂರು

ಸಂಭ್ರಮ ಸಡಗರದ ಸಂಕ್ರಾಂತಿ ಆಚರಣೆ

ಮಹದೇವಪುರ : ವರ್ಷದ ಮೊದಲ ಹಾಗೂ ರೈತರ ಪಾಲಿನ‌ ಸುಗ್ಗಿ ಹಬ್ಬ ಸಂಕ್ರಾಂತಿ ಹಬ್ಬವನ್ನು ಬಿಎಂಟಿಸಿ ಅಧ್ಯಕ್ಷ ಎನ್.ಎಸ್ ನಂದೀಶರೆಡ್ಡಿ ಕುಟುಂಬ ಸಮೇತ ಸಗೃಹದಲ್ಲಿ ಗೋವುಗಳಿಗೆ ಪೂಜೆ ಸಲ್ಲಿಸಿ ಆಚರಿಸಲಾಯಿತು.
 ನಂತರ ಮಾತನಾಡಿದ ಅವರು, ನಾಡಿನೆಲ್ಲೆಡೆ ಸಡಗರ ಸಂಭ್ರಮದಿಂದ ಆಚರಿಸಿಸಲಾಗುತ್ತಿದ್ದು, ಈ ಹಬ್ಬದಂದು ರೈತರು ತಾವು ಬೆಳೆದ ದವಸ ದಾನ್ಯ ಹಾಗೂ ದನ ಕರುಗಳನ್ನು ಪೂಜಿಸಿ ಎಳ್ಳು ಬೆಲ್ಲ ಹಂಚಿ ಸಂಭ್ರಮಿಸುತ್ತಾರೆ. ಆದರೆ ಸಿಲಿಕಾನ್ ಸಿಟಿ ಬೆಂಗಳೂರು ನಗರ ಬೆಳೆದಂತೆ ದನಕರುಗಳ ಸಂಖ್ಯೆ ಕಡಿಮೆಯಾಗಿದೆ, ಹಸುಗಳನ್ನು ಸಾಕುವುದರಿಂದ ಕೇವಲ ಹಾಲು ನೀಡುವುದಲ್ಲದೆ ರೈತರ ವ್ಯವಸಾಯಕ್ಕೆ ಬೆಳೆಗಳನ್ನು ಬೆಳೆಯಲು ಗೊಬ್ಬರ ಹಲವಾರು ಉಪಯೋಗಗಳು ನೀಡುತ್ತವೆ ಎಂದರು.
 ನಮ್ಮ ತಾತನವರ ಕಾಲದಿಂದಲು ನಮ್ಮ ಮನೆಯಲ್ಲಿ ಗೋವುಗಳನ್ನು ಸಾಕುತ್ತಾ  ಸಂಪ್ರದಾಯದಂತೆ ಪ್ರತಿ ವರ್ಷವೂ ನಮ್ಮ ಮನೆಯಲ್ಲಿ ಆಗಿನಿಂದಲೂ ಹಸುಗಳನ್ನು ಸಾಕಲಾಗುತ್ತಿದ್ದು ಸಂಕ್ರಾಂತಿ ಹಬ್ಬ ಬಂತೆಂದರೆ ಕುಟುಂಬ ವರ್ಗದವರೆಲ್ಲರು ಸೇರಿ ಸಡಗರ ಸಂಭ್ರಮದಿಂದ ರಾಸುಗಳನ್ನು ಅಲಂಕರಿಸಿ ಪೂಜಿಸಿ ಹಬ್ಬ ಆಚರಿಸುತ್ತೇವೆ. ನಂತರ ಕಿಚ್ಚುಹಾಯಿಸಿ ಊರಿನಾದ್ಯಂತ ಮೆರವಣಿಗೆ ನಡಿಸಲಾಗುತ್ತದೆ ಎಂದು ತಿಳಿಸಿದರು.

Leave a Reply

Your email address will not be published.

Back to top button